ಗೋಕಾಕ ಜಲಪಾತ ಕರ್ನಾಟಕದ ಎರಡನೆ ದೊಡ್ಡ ಜಲಪಾತ. ಬೆಳಗಾವಿ ಜಿಲ್ಲೆಯ ಗೋಕಾಕದಿಂದ ೬ ಕಿ.ಮಿ. ದೂರದಲ್ಲಿರುವ ಈ ಜಲಪಾತವು ಘಟಪ್ರಭ ನದಿಯಿಂದ ಉಂಟಾಗುತ್ತದೆ. ಗೋಕಾಕ್ ಜಲಪಾತವು ಅಮೇರಿಕ ದೇಶದ ನಯಾಗರ ಜಲಪಾತವನ್ನು ಹೊಲುವುದರಿಂದ ಇದನ್ನು ಭಾರತದ ನಯಾಗಾರವೆಂದು ಕರೆಯಲಾಗುತ್ತದೆ. ೧೮೦ ಅಡಿಯಿಂದ ಧುಮುಕುವ ನೀರು ಇಲ್ಲಿ ನಯನ ಮನೋಹರ ದೃಶ್ಯವನ್ನು ನಿರ್ಮಿಸಿದೆ. ವರ್ಷದ ಜೂನ್ ಆರಂಭದಿಂದ ಡಿಸೆಂಬರವರೆಗೂ ಇಲ್ಲಿಗೆ ಭೇಟಿ ನೀಡಬಹುದು. ಮಳೆಗಾಲದಲ್ಲಿ ದಪ್ಪ ಕೆಂಪು ಕಂದು ಬಣ್ಣದ ನೀರು ಬಂಡೆಯ ಅಂಚನ್ನು ಉಜ್ಜುತ್ತ ಸ್ವಲ್ಪ ದೂರದಿಂದ ಕೇಳಿಸುವ ಸಣ್ಣ ಘರ್ಜನೆಯೊಂದಿಗೆ ಹರಿದು ಬರುತ್ತದೆ. ನದಿಗೆ ಅಡ್ಡಲಾಗಿ ಒಂದು ತೂಗು ಸೇತುವೆ ಇದೆ. ಅದರ ಅಳತೆ ೨೦೧ ಮೀಟರ್ (೬೫೯ ಅಡಿ). ಇದರ ಎತ್ತರ ಕಲ್ಲು ಹಾಸಿಗೆಗಿಂತ ೧೪ ಮೀಟರ್ (೪೬ ಅಡಿ) ಮೇಲೆ. ಹಳೆಯದೊಂದು ವಿದ್ಯುತ್ ಉತ್ಪಾದನಾ ಕೇಂದ್ರ ಇದೆ ಮತ್ತು ಇದು ವಿದ್ಯುತ್‍ಅನ್ನು ೧೮೮೭ ರಲ್ಲಿ ಮೊದಲ ಬಾರಿಗೆ ಇಲ್ಲಿ ಉತ್ಪಾದಿಸಿತು. == ಉಲ್ಲೇಖಗಳು ==